ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕಥೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನೀನೇ ಮೊದಲನೇ ಬಾರಿಗೆ
ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ, ನೀನ್ಯಾರು. ..
ನಮ್ಮ ಮೊದಲನೇ ಭೇಟಿಗೆ
ನೀನು ತಿಳಿಸುವ ವೇಳೆಗೆ
ನಾನು ಬರುವುದು ಎಲ್ಲಿಗೆ, ನೀನ್ಯಾರು. ..
ನನ್ನ ನೋಡೆ ಅಂತಾ ಹಿಂದೆ ಅಲೆದೋನು ನೀನೇ,
ನಿನ್ನ ನೋಡೋ ಆಸೆ ನನಗೆ ಬಾ ಬೇಗನೆ...
ಪ್ರೀತ್ಸೆ ಅಂತ ಪ್ರಾಣತಿನ್ನೊ ಪ್ರೇಮಿನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ ಯಾರೋ
ತಂಗಾಳಿಯ ಆಲಾಪವೆ ಪಿಸುಮಾತಿನ ಶೃಂಗಾರವೇ
ಆಕಾಶದಾಚೆ ನಾ ನವಿಲಾಗಿ ಕುಣಿವೆ
ನನ್ನ ಹೆಜ್ಜೆಗೆ ನೀ ತಾಳವಲ್ಲವೇ
ಮನದಾಳದಿ ಗುನುಗೊ ಸಿಹಿಯಾದ ಸ್ವರದ
ನನ್ನ ಹಾಡಿನ ಶ್ರುತಿ ನೀನೇ ಅಲ್ಲವೇ
ಒಲವೇ ಒಲವೇ ಒಲವೇ
ಈ ನದಿಗೆ ಕಡಲಾಗಿರುವೆ..
ಒಲವೇ ಒಲವೇ ಒಲವೇ
ನನ್ನೀ ಜೀವಾನೆ ಮುಡಿಪಾಗಿಡುವೆ
We use cookies to analyze website traffic and optimize your website experience. By accepting our use of cookies, your data will be aggregated with all other user data.